Menu
Log in


Log in
  • Home
  • Recent Updates

Recent Updates

<< First  < Prev   1   2   3   4   5   ...   Next >  Last >> 
  • 11 Sep 2023 3:31 PM | Seva Bharathi (Administrator)

    ಸೇವಾಧಾಮದಲ್ಲಿ ಪುನಶ್ಚೇತನಗೊಂಡ ಸನಿವಾಸಿಗಳು, ಸಿಬ್ಬಂದಿ ವರ್ಗ ಹಾಗೂ    ಸಂಸ್ಥೆಯ  ಹಿತೈಷಿ ಗಳಿಗೆ ಬೆಂಗಳೂರಿನಲ್ಲಿ 2 ದಿನದ ಪ್ರವಾಸವನ್ನು ಆಯೋಜಿಸಲಾಗಿತ್ತು.

     ಬೆಂಗಳೂರಿನ ರಂಗೋಲಿ ಗಾರ್ಡನ್, ಮಾಡ್ರನ್ ವಿಲೇಜ್ ಹಾಗೂ ಚಿಕ್ಕಬಳ್ಳಾಪುರದ ಈಶ ಫೌಂಡೇಶನ್ ಗೆ ಭೇಟಿ ನೀಡಲಾಯಿತು.ಒಟ್ಟು 4 ಮಂದಿ ದಿವ್ಯಾಂಗರು, 7 ಮಂದಿ ಸಿಬ್ಬಂದಿ ವರ್ಗ ಹಾಗೂ ಸಂಸ್ಥೆಯ ಹಿತೈಷಿ ಗಳಾದ ಶ್ರೀಮತಿ ಮಂಜುಳಾ ವಿ ಪ್ರಸಾದ್ ಹಾಗೂ ಶ್ರೀ ಚಂದನ್ ಗುಡಿಗಾರ್ ಪಾಲ್ಗೊಂಡಿದ್ದರು



  • 24 Aug 2023 10:33 AM | Seva Bharathi (Administrator)
    ಕುತ್ಲೂರು(ಆ.24)ಕುತ್ಲೂರು ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಸೇವಾಭಾರತಿ ಕನ್ಯಾಡಿ ಇವರ ಆಶ್ರಯದಲ್ಲಿ ನವಚೇತನ ಚಾರಿಟೇಬಲ್ ಟ್ರಸ್ಟ ಫಾರ್ ಡಿಸೇಬಲ್ ರಾಮನಗರ ಇವರ ವತಿಯಿಂದ ಉಚಿತ ಪುಸ್ತಕವನ್ನು ನೀಡಲಾಯಿತು. ಈ ಸಂಧರ್ಭದಲ್ಲಿ ನಾರಾವಿ ಗ್ರಾಮ ಪಂಚಾಯಿತಿಯ ಅಧ್ಯಕ್ಷ ರಾದ ರಾಜವರ್ಮಜೈನ್ ನೆರವೇರಿಸಿದರು ಶಾಲಾ ಎಸ್. ಡಿ. ಎಂ. ಸಿ .ಅಧ್ಯಕ್ಷರಾದ ಕೆ.ರಾಮಚಂದ್ರಭಟ್ ನೊಟ್ ಬುಕ್ ನೀಡಿರುವ ಸಂಸ್ಥೆಯ ವ್ಯವಸ್ಥಾಪಕರನ್ನುಅಭಿನಂದಿಸಿದರು ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಮತಿ ರೂಪ    ವಂದಿಸಿದರು.
  • 23 Aug 2023 10:29 AM | Seva Bharathi (Administrator)

    ವೇಣೂರು(ಆ.23):  ನವಚೇತನ ಚಾರಿಟೇಬಲ್ ಟ್ರಸ್ಟ್ ರಾಮನಗರ ಮತ್ತು ಸೇವಾಭಾರತಿ ಕನ್ಯಾಡಿ ಇವರ ವತಿಯಿಂದ ಉಂಬೆಟ್ಟು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ   ಮಕ್ಕಳಿಗೆ  ಉಚಿತ  ಪುಸ್ತಕ ವಿತರಣಾ ಕಾರ್ಯಕ್ರಮವು ಆಗಸ್ಟ್ 23 ರಂದು ನಡೆಯಿತು.

    ಕಾರ್ಯಕ್ರಮದಲ್ಲಿ ನವಚೇತನ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ಕೆ. ಎಸ್. ಮಂಜುನಾಥ ಮತ್ತು ಸೇವಾಭಾರತಿ ಅಧ್ಯಕ್ಷರಾದ ವಿನಾಯಕ ರಾವ್ ಕನ್ಯಾಡಿ, ಗ್ರಾಮ ಪಂಚಾಯತ್ ಸದಸ್ಯ ಹರೀಶ್ ಪಿ. ಯಸ್., ಶಾಲಾ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಧನಂಜಯ ಜೈನ್, ಉಪಾಧ್ಯಕ್ಷೆ ಚೇತನ ಭಾಲಭಾರತಿ ಶಿಕ್ಷಕಿ ಮಮತ, ಶಾಲಾ ಶಿಕ್ಷಕರು ಉಪಸ್ಥಿತರಿದ್ದರು.

  • 23 Aug 2023 9:18 AM | Seva Bharathi (Administrator)

    ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಕಣಿಯೂರು ಗ್ರಾಮದ ವ್ಯಾಪ್ತಿಯಲ್ಲಿ ಬರುವ ಸ.ಹಿ.ಪ್ರಾ.ಶಾಲೆ ಪಿಲಿಗೂಡು ಇಲ್ಲಿ ದಿನಾಂಕ 23/08/2023ರಂದು   ನವಚೇತನ ಚಾರಿಟೇಬಲ್ ಟ್ರಸ್ಟ್ ಫಾರ್ ಡಿಸೇಬಲ್ಸ್ ರವರ ವತಿಯಿಂದ ಸೇವಾ ಭಾರತಿ ಕನ್ಯಾಡಿ ಇವರ ಸಹಯೋಗದೊಂದಿಗೆ ಎಲ್ಲಾ ಮಕ್ಕಳಿಗೂ ಉಚಿತ ನೋಟ್ ಪುಸ್ತಕಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷರಾದ 'ಇಸ್ಮಾಯಿಲ್' ರವರು ಹಾಗೂ ರೈತಬಂಧು ರೈಸ್ ಮಿಲ್ ನ   ಮಾಲೀಕರಾದ 'ಶಿವಶಂಕರ್ ನಾಯಕ್' ರವರು, ಶಾಲಾ ಮುಖ್ಯೋಪಾಧ್ಯಾಯಿನಿ 'ಫ್ಲೇವಿಯ ಡಿಸೋಜಾ'ರವರು ಹಾಗೂ ಸಹಶಿಕ್ಷಕರು  ಉಪಸ್ಥಿತರಿದ್ದರು.

  • 23 Aug 2023 9:13 AM | Seva Bharathi (Administrator)

    ಬೆಳಾಲು(ಆ.23): ಸೇವಾಭಾರತಿ ಕನ್ಯಾಡಿಯ ಖಜಾಂಚಿ  ಶ್ರೀ ಕೆ ವಿನಾಯಕ ರಾವ್ ಇವರ ಸಹಕಾರದೊಂದಿಗೆ ರಾಮನಗರ ನವಚೇತನ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾದ ಶ್ರೀ ಕೆ. ಎಸ್. ಮಂಜುನಾಥ್ ಇವರು ಬೆಳಾಲು ಸರಸ್ವತಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಗಳನ್ನು ನೀಡಿದರು. ಈ ಸಂಧರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರು ಶ್ರೀ ಚಿದಾನಂದ ಉಪಸ್ಥಿತರಿದ್ದರು.

  • 22 Aug 2023 5:21 PM | Seva Bharathi (Administrator)

    ಮುಂಡಾಜೆ (ಆ.22):ಸೇವಾಭಾರತಿ ಖಜಾಂಚಿ ಶ್ರೀ ಕೆ ವಿನಾಯಕ ರಾವ್ ಅವರ ಸಹಕಾರದೊಂದಿಗೆ ನವಚೇತನ ಚಾರಿಟೇಬಲ್ ಟ್ರಸ್ಟ್ ನ ಸಂಸ್ಥಾಪಕರಾದ ಶ್ರೀ ಮಂಜುನಾಥ್ ಕೆ ಎಸ್ ಸರಸ್ವತಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಿಗೆ  ಉಚಿತವಾಗಿ ಪುಸ್ತಕಗಳನ್ನು ನೀಡಿದರು. ಈ ಸಂಧರ್ಭದಲ್ಲಿ , ಸರಸ್ವತಿ ಆಂಗ್ಲ ಮಾಧ್ಯಮ ಶಾಲೆಯ ಸಹಾಯಕ ಅಧ್ಯಾಪಕಿ ಶ್ರೀಮತಿ ಶ್ರೀಜ, , ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾದ್ಯಾಯಿನಿ ಶ್ರೀಮತಿ ಚಂದ್ರಮತಿ, ಆಡಳಿತ ಮಂಡಳಿ ಸದಸ್ಯರಾದ ಶ್ರೀ ನಾರಾಯಣ ಫಡ್ಕೆ ಮತ್ತು ಶ್ರೀಮತಿ ಭಾರತಿ ಫಡ್ಕೆ ಉಪಸ್ಥಿತರಿದ್ದರು.

  • 22 Aug 2023 5:16 PM | Seva Bharathi (Administrator)

    ಕೋಡಿಯಾಲಬೈಲು (ಆ.22): ಬೆಳ್ತಂಗಡಿ ತಾಲೂಕಿನ ಕಡಿರುದ್ಯಾವರ ಗ್ರಾಮದ ಕೋಡಿಯಾಲಬೈಲು ಸರ್ಕಾರಿ ಶಾಲೆಯ ವಿಧ್ಯಾರ್ಥಿಗಳಿಗೆ ಸೇವಾಭಾರತಿ ಕನ್ಯಾಡಿ ಖಜಾಂಚಿ ಶ್ರೀ ಕೆ ವಿನಾಯಕ ರಾವ್ ಅವರ ಸಹಕಾರದೊಂದಿಗೆ ರಾಮನಗರ ನವಚೇತನ ಚಾರಿಟೇಬಲ್ ಟ್ರಸ್ಟ್ ಫಾರ್ ಡೀಸಬಲ್ ಶ್ರೀ ಮಂಜುನಾಥ್ ಕೆ. ಎಸ್  ಇವರು ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ  ಪುಸ್ತಕಗಳನ್ನು ಉಚಿತವಾಗಿ ವಿತರಿಸಿದರು.ಈ ಸಂದರ್ಭದಲ್ಲಿ ನವಚೇತನ ಟ್ರಸ್ಟ್ ಫಾರ್ ಡಿಸೆಬಲ್ಸ್ ನ ಸಂಸ್ಥಾಪಕರಾದ ಮಂಜುನಾಥ. ಕೆ.ಎಸ್ ,ಸೇವಾಧಾಮದ ಸಂಸ್ಥಾಪಕರಾದ ಶ್ರೀ ವಿನಾಯಕ ರಾವ್ ಕನ್ಯಾಡಿ ,ಕೋಡಿಯಾಲಬೈಲು ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಪಿಲೋಮಿನಾ ಸಿ.ಜೆ ಮತ್ತು ಶ್ರೀ ದುರ್ಗಾ ಶಕ್ತಿ ಮಹಿಳಾ ಸಂಘದ ಪ್ರಮುಖರಾದ ಶ್ರೀಮತಿ ಸವಿತಾ ರವೀಂದ್ರ ಪೂಜಾರಿ ಅವರು ಉಪಸ್ಥಿತರಿದ್ದರು.

  • 22 Aug 2023 10:26 AM | Seva Bharathi (Administrator)

    ಪೆರಿಂಜೆ (ಆ.22) : ಸೇವಾಭಾರತಿ ಕನ್ಯಾಡಿ ಸಹಕಾರದೊಂದಿಗೆ ರಾಮನಗರ ನವಚೇತನ ಚಾರಿಟೇಬಲ್ ಟ್ರಸ್ಟ್ ನ ವತಿಯಿಂದ ಪೆರಿಂಜೆ ಸರಕಾರಿ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕಗಳನ್ನು ನೀಡಲಾಯಿತು.

    ಈ ಸಂಧರ್ಭದಲ್ಲಿ ಶ್ರೀ ವೆಂಕಟೇಶ್, ಸೇವಾಭಾರತಿ ಖಜಾಂಚಿ ಕೆ. ವಿನಾಯಕ ರಾವ್, ಶ್ರೀ ಸುಧಾಕರ್ ನೂಯಿ, ಶ್ರೀಮತಿ ಶಶಿಕಲಾ, ಮುಖ್ಯೋಪಾಧ್ಯಾಯರು ಶ್ರೀಮತಿ ನೀನಾ ಕುವೆಲ್ಹೋ, ಶ್ರೀ ರಾಜೇಶ್ ಎನ್, ಶ್ರೀ ವಿಶ್ವನಾಥ್ ಗೌಡ, ಶ್ರೀಮತಿ ಶಶಿ ಪ್ರಭ, ಪದ್ಮಾವತಿ, ಸಚ್ಚಿದಾನಂದ, ದೈಹಿಕ ಶಿಕ್ಷಕಿ ಪುಷ್ಪ ಉಪಸ್ಥಿತರಿದ್ದರು.

  • 22 Aug 2023 10:18 AM | Seva Bharathi (Administrator)

    ಪದ್ದದಂಡ್ಕ (ಆ.22): ಸೇವಾಭಾರತಿ ಕನ್ಯಾಡಿ ಸಹಕಾರದೊಂದಿಗೆ ರಾಮನಗರ ನವಚೇತನ ಚಾರಿಟೇಬಲ್ ಟ್ರಸ್ಟ್ ಫಾರ್ ಡೀಸಬಲ್ಸ್ ನ ಅಧ್ಯಕ್ಷರು ಕೆ ಎಸ್ ಮಂಜುನಾಥ್ ಪದ್ದದಂಡ್ಕ ಸರಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಗಳನ್ನು ನೀಡಿದರು.

    ಈ ಸಂಧರ್ಭದಲ್ಲಿ ಸೇವಾಭಾರತಿ ಖಜಾಂಚಿ ಶ್ರೀ ಕೆ ವಿನಾಯಕ ರಾವ್, ಹಾಗೂ ಶಾಲಾ ಮುಖ್ಯೋಪಾಧ್ಯಯರು ಶ್ರೀಮತಿ ಕಮಲ ಉಪಸ್ಥಿತರಿದ್ದರು

  • 22 Aug 2023 10:11 AM | Seva Bharathi (Administrator)

    ಬಡಕೋಡಿ (ಆ.22): ಸೇವಾಭಾರತಿ ಕನ್ಯಾಡಿ ಖಜಾಂಚಿ ಶ್ರೀ ಕೆ ವಿನಾಯಕ ರಾವ್ ಅವರ ಸಹಕಾರದೊಂದಿಗೆ ರಾಮನಗರ ನವಚೇತನ ಚಾರಿಟೇಬಲ್ ಟ್ರಸ್ಟ್ ಫಾರ್ ಡೀಸಬಲ್ ಶ್ರೀ ಮಂಜುನಾಥ್ ಕೆ. ಎಸ್ ಇವರು ಬಡಕೋಡಿ ಸರಕಾರಿ ಶಾಲಾ ಮಕ್ಕಳಿಗೆ ಉಚಿತ ಪುಸ್ತಕಗಳನ್ನು ನೀಡಿದರು.

        ಈ ಸಂಧರ್ಭದಲ್ಲಿ ಶ್ರೀ ವೆಂಕಟೇಶ್, ಗ್ರಾಮ ಸಮೃದ್ಧಿ ಸಹಕಾರದ ಸಿ.ಇ.ಒ ಶ್ರೀಮತಿ ಶಶಿಕಲಾ, ಮುಖ್ಯೋಪಾಧ್ಯಯ ರು ಶ್ರೀಮತಿ ಲೀನ ಡಿಸೋಜ, ಕೆ ಹನುಮಂತಪ್ಪ, ಶ್ರೀಮತಿ ಸೌಮ್ಯ ಹಾಗೂ ಕುಮಾರಿ ಕುಸುಮಿತ ಉಪಸ್ಥಿತರಿದ್ದರು.

<< First  < Prev   1   2   3   4   5   ...   Next >  Last >> 


Accreditation:    


Copyright© 2021-22. Seva Bharathi Kanyady. All Rights Reserved.

Powered by Wild Apricot Membership Software