Menu
Log in


Log in
  • Home
  • Blood Donation Camp

Blood Donation Camp

9 Oct 2022 12:38 PM | Seva Bharathi (Administrator)

ಸೇವಾಭಾರತಿ ಕನ್ಯಾಡಿ, ಗೌಡರ ಯಾನೆ ಒಕ್ಕಲಿಗರ ಸೇವಾ ಸಮಿತಿ, ರೋಟರಿ ಕ್ಲಬ್ ಬೆಳ್ತಂಗಡಿ ಬ್ಲಡ್ ಬ್ಯಾಂಕ್, ಜಿಲ್ಲಾ ಸರಕಾರಿ ವೆನ್ಲಕ್ ಆಸ್ಪತ್ರೆ, ಮಂಗಳೂರು ಇವುಗಳ ಸಹಯೋಗದೊಂದಿಗೆ ಅಕ್ಟೋಬರ್ 9 ರಂದು ಶರತ್ ಕೃಷ್ಣ ಪಡ್ವೆಟ್ನಾಯ ಇವರು ಉಜಿರೆ ಶಾರದಾ ಮಂಟಪದಲ್ಲಿ ನಡೆದ ರಕ್ತದಾನ ಶಿಬಿರ ಉದ್ಘಾಟಿಸಿ, ಮಾತನಾಡಿದರು. ವೈದ್ಯಕೀಯ ಸಲಹೆಗಾರ ಶ್ರೀಧರ್ ಕೆ. ವಿ ಶುಭ ಹಾರೈಸಿದರು. ಗೌಡರ ಯಾನೆ ಒಕ್ಕಲಿಗರ ಸೇವಾ ಸಮಿತಿ ಉಜಿರೆ ಇದರ ಅಧ್ಯಕ್ಷ ಧರ್ಣಪ್ಪ ಗೌಡ ಅಧ್ಯಕ್ಷತೆ ವಹಿಸಿದ್ದರು. ಕನ್ಯಾಡಿ ಸೇವಾಭಾರತಿ ಅಧ್ಯಕ್ಷ ವಿನಾಯಕ ರಾವ್ ವೆನ್ ಲಾಕ್ ರಕ್ತ ನಿಧಿ ವಿಭಾಗದ ತಾಂತ್ರಿಕ ಮೇಲಸ್ತುವಾರಿ ಅಶೋಕ್, ಡಾ. ಸವಿ ಗೌಡರ ಯಾನೆ ಒಕ್ಕಲಿಗರ ಸೇವಾ ಸಮಿತಿ, ಗೌರವಾಧ್ಯಕ್ಷ ಪ್ರಕಾಶ್ ಗೌಡ, ಪ್ರಗತಿ ಮಹಿಳಾ ಮಂಡಲ ಕಾರ್ಯದರ್ಶಿ ಗಾಯತ್ರಿ ಶ್ರೀಧರ್ ಸಹಿತ ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು. ಒಕ್ಕಲಿಗರ ಸೇವಾ ಸಮಿತಿ ಉಪಾಧ್ಯಕ್ಷ ಗೋಪಾಲಕೃಷ್ಣ ಜಿ .ಕೆ ನಿರೂಪಿಸಿ ರಮೇಶ್ ಪೇಲಾರ್ ವಂದಿಸಿದರು. ಒಟ್ಟು102 ಯೂನಿಟ್ ರಕ್ತವನ್ನು ಸಂಗ್ರಹಿಸಲಾಯಿತು.


Accreditation:    


Copyright© 2021-22. Seva Bharathi Kanyady. All Rights Reserved.

Powered by Wild Apricot Membership Software